Activities
ಉಚಿತ ವೇದ ಮಂತ್ರ ತರಗತಿಗಳು
ಬೆಳಗ್ಗೆ 6.00 ರಿಂದ 7.00 ರವರೆಗೆ ತ್ರಿಮತಸ್ಥ ಬ್ರಾಹ್ಮಣರಿಗೆ ವೇದ ಮಂತ್ರ ತರಗತಿಗಳನ್ನು ಆರಂಭಿಸಲಾಗಿದೆ. ಆಸಕ್ತಿಯುಳ್ಳವರು ಭಾಗ ವಹಿಸಬೇಕಾಗಿ ಪ್ರಾರ್ಥನೆ.
ದತ್ತಾತ್ರೇಯ ಕಲಾ ಮತ್ತು ಸಾಂಸ್ಕೃತಿಕ ಕೇಂದ್ರ
ಪ್ರತಿದಿನ ಸಂಜೆ 6 ರಿಂದ 8 ರವರೆಗೆ ಸೋಮವಾರ, ಮಂಗಳವಾರ, ಬುಧವಾರ , ಶುಕ್ರವಾರ ಭಜನೆ , ಲಲಿತಾ ಸಹಸ್ರನಾಮ,
ವಿಷ್ಣುಸಹಸ್ರನಾಮ, ದತ್ತ ಸಹಸ್ರನಾಮ, ಸೌಂದರ್ಯ ಲಹರಿ, ಗುರುಗೀತೆ ಮುಂತಾದ ಕಾರ್ಯಕ್ರಮಗಳನ್ನು ಹಾಗೂ ಪ್ರತಿ ಗುರುವಾರ
ಗುರುಚರಿತ್ರೆ ಸಾಮೂಹಿಕ ಪಾರಾಯಣವನ್ನು ಹಮ್ಮಿಕೊಳ್ಳಲಾಗಿದೆ.
ದತ್ತಾತ್ರೇಯ ಯೋಗಾ (Yoga) ಕೇಂದ್ರ ಮತ್ತು ಉಚಿತ ವೈದ್ಯಕೀಯ ತಪಾಸಣೆ
ಪ್ರತಿದಿನ ಯೋಗ ತರಗತಿಗಳನ್ನು ಹಾಗೂ ಪ್ರತಿ ಭಾನುವಾರ ಸಂಜೆ ಉಚಿತ ವೈದ್ಯಕೀಯ ತಪಾಸಣಾ ಕಾರ್ಯಕ್ರಮವನ್ನು
ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಕಛೇರಿಯಲ್ಲಿ ಸಂಪರ್ಕಿಸಿ.
Sevas
ನಿತ್ಯಸಂಕಲ್ಪ ಸೇವೆ ರೂ.2500/- (Nitya Sankalpa Seva)
ಪ್ರತಿದಿನ ಭಕ್ತಾದಿಗಳ ಸೂಚನೆ ಮೇರೆಗೆ ಅವರ ಹೆಸರಿನಲ್ಲಿ ಅಥವಾ ಭಕ್ತಾದಿಗಳು
ತಿಳಿಸುವವರ ಹೆಸರಿನಲ್ಲಿ ಸಂಕಲ್ಪ ಹಾಗೂ ಪೂಜೆ ನೆರವೇರಿಸಲಾಗುವುದು.
ವರ್ಷದಲ್ಲಿ ಒಂದು ದಿನ ಶ್ರೀ ದತ್ತಾತ್ರೇಯ, ಶ್ರೀ ಪ್ರಸನ್ನ ಗಣಪತಿ, ಶ್ರೀ ಅಭಯ
ಆಂಜನೇಯ ಯಾವುದಾದರೂ ಒಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ
ನೀಡಲಾಗುವುದು.
ಭಕ್ತಾದಿಗಳ ಕೋರಿಕೆ ಮೇರೆಗೆ ನಿತ್ಯಸೇವಾ ಸಂಕಲ್ಪವನ್ನು 2500 ರೂ.ಗಳಿಗೆ ಹೆಚ್ಚಿಸಲಾಗಿದೆ.
ಭಕ್ತಾದಿಗಳು ಈಗಾಗಲೇ ರೂ.1000 ಅಥವಾ ರೂ.1500 ನೀಡಿರುವವರು ಹೆಚ್ಚುವರಿ
ಶುಲ್ಕವನ್ನು ನೀಡಿ ಸಹಕರಿಸಬೇಕಾಗಿ ಪ್ರಾರ್ಥನೆ.
ಶಾಶ್ವತ ಪೂಜೆ ರೂ. 500/- (Shashwata Seva)
ಕನ್ನಡ ದಿನಾಂಕ (ಪಂಚಾಂಗ) ಅಥವಾ ಇಂಗ್ಲಿಷ್ ದಿನಾಂಕ (ಕ್ಯಾಲೆಂಡರ್)ದಂತೆ
ಪ್ರತಿ ವರ್ಷದಲ್ಲಿ ಒಂದು ದಿನ ಭಕ್ತಾದಿಗಳ ಸೂಚನೆ ಮೇರೆಗೆ ಶ್ರೀ ದತ್ತಾತ್ರೇಯ,
ಶ್ರೀ ಪ್ರಸನ್ನ ಗಣಪತಿ, ಶ್ರೀ ಅಭಯ ಆಂಜನೇಯ ಯಾವುದಾದರೂ ಒಂದು
ದೇವರಿಗೆ ಮಾತ್ರ ಭಕ್ತಾದಿಗಳು ಸೂಚಿಸಿದ ಹೆಸರಿನಲ್ಲಿ ಪೂಜೆ ಸಲ್ಲಿಸಿ ಪ್ರಸಾದ
ನೀಡಲಾಗುವುದು.
ಭಕ್ತಾದಿಗಳ ಕೋರಿಕೆ ಮೇರೆಗೆ ಶಾಶ್ವತ ಪೂಜೆಯನ್ನು 500 ರೂ.ಗಳಿಗೆ ಹೆಚ್ಚಿಸಲಾಗಿದೆ.
ಭಕ್ತಾದಿಗಳು ಈಗಾಗಲೇ ರೂ.110ಅಥವಾ ರೂ.250 ನೀಡಿರುವವರು ಹೆಚ್ಚುವರಿ
ಶುಲ್ಕವನ್ನು ನೀಡಿ ಸಹಕರಿಸಬೇಕಾಗಿ ಪ್ರಾರ್ಥನೆ.
ದತ್ತಾತ್ರೇಯ ವಧು-ವರಾನ್ವೇಷಣಾ ಕೇಂದ್ರ
Dattatreya Vadhu Vara Matrimonial Center
ಸಮಯ: ಸೋಮವಾರ, ಬುಧವಾರ, ಶುಕ್ರವಾರ, ಭಾನುವಾರ ಸಂಜೆ 5.00 ರಿಂದ 7.00 ಮತ್ತು ಶನಿವಾರ ಬೆಳಗ್ಗೆ 10.00 ರಿಂದ 12.00 ರವರೆಗೆ ಕಾರ್ಯ ನಿರ್ವಹಿಸುತ್ತದೆ.
ಸೂಚನೆ: ವಿಶೇಷ ಹಬ್ಬದ ದಿನ ಹಾಗೂ ದತ್ತಜಯಂತಿ ಸಂದರ್ಭದಲ್ಲಿ ಕಾರ್ಯನಿರ್ವಹಿಸುವುದಿಲ್ಲ.
ನೋಂದಾಯಿಸಲು ಬೇಕಾದ ವಿವರಗಳು : ವಧು-ವರರ ಭಾವಚಿತ್ರ ಹಾಗೂ ಜಾತಕದ ಪ್ರತಿ
ನೋಂದಣಿ ಶುಲ್ಕ : ರೂ.600/-